ಶರಣಬಸವರ ಕಾಲ ಕ್ರಿ.ಶ.1746- 1822 ಎಂದು ಗುರುಲಿಂಗಕವಿಗಳ ಶ್ರೀಶರಣಬಸವೇಶ್ವರ ಪುರಾಣದ ಸಂಪಾದಕರಾದ ಡಾ ಎಲ್ ಬಸವರಾಜು ಸಂಶೋಧಕರು ಹೇಳಿದ್ದಾರೆ. 18–19ನೇ ಶತಮಾನದ ಕಾಲ ಖಂಡ ಭಾರತದ ಮಟ್ಟಿಗೆ ಸಂಕ್ರಮಣ ಕಾಲ. ಬ್ರಿಟಿಷರ ಕಪಿಮುಷ್ಠಿಯಲ್ಲಿ ಭಾರತ ನಲಗುತ್ತಿದ್ದ ಕಾಲವಾಗಿತ್ತು. ಒಂದೆಡೆ ಹೈದ್ರಾಬಾದಿನ ನಿಜಾಮ, ಮರಾಠರ ಪೇಶ್ವೆಯವರು, ವೊಗಲ ಪಳಿಯುಳಿಕೆಗಳಿಂತ ಸಂಸ್ಥಾನಗಳು ಬ್ರಿಟಿಷರ ಅರಸೊತ್ತಿಗೆ ಒಪ್ಪಿಕೊಂಡ ಕಾಲ. ಮತ್ತೊಂದೆಡೆ ಬ್ರಿಟಿಷರು ಒಂದೊಂದಾಗಿ ದೇಶಿ ಸಂಸ್ಥಾನಗಳನ್ನು ನುಂಗುವ ಹುನ್ನಾರವನ್ನು ಗಮನಿಸಿ ದೇಶಿ ಸಂಸ್ಥಾನಗಳು ಅಲ್ಲಲ್ಲಿ ಪ್ರತಿಭಟಿಸುವ ಕಾಲವಾಗಿತ್ತು. ಇಂತಹ ಸಂದಿಗ್ದ ಕಾಲದಲ್ಲಿ ಶರಣಬಸವರು ಸದಾ ಸಂಚರಿಸುತ್ತ ಕೇವಲ ಧಮ್ರ ಬೋಧನೆ ಮಾಡಿದರು ಎಂಬುದು ಪೂಣ್ರ ಸರಿಯಲ್ಲ. ಶರಣಬಸ್ಸಪ್ಪನವರು ಭಕ್ತಿಯ ಮಾಗ್ರದಲ್ಲಿ ಸಾಗಿದರೂ ಜನರಲ್ಲಿ ಧಮ್ರ ಜಾಗೃತಿ ಮಾಡಿದರು. ಧಮ್ರ ರಕ್ಷಣೆಯಾಗಲು ದೇಶ ರಕ್ಷಿಸಬೇಕು ಎಂದು ಅರಿತು ಕೊಂಡ ಕಾಲಜ್ಞಾನಿಗಳು ಶರಣಬಸ್ಸಪ್ಪನವರಾಗಿದ್ದರು. ವಿದೇಶಿ ಆಕ್ರಮಣಗಳಿಗೆ ತಡೆಗೋಡೆಯಾಗಿ ಬದಕುವ ಜೀವನ ಶೈಲಿ ಕಲಿಸಿದವರು. ಗುಲಾಮಿತನದ ವಿರುದ್ಧದ ಹೋರಾಟದ ಕಾಲಖಂಡದಲ್ಲಿ ನಾಡಿನ ಜನತೆಗೆ ಧೈಯ್ರ ಸ್ಥೈಯ್ರದಿಂದ ಬದುಕುವಂತಹ ವಿಶ್ವಾಸ ತುಂಬಿದವರು.
ದೇವಕಿ ಸುತನಾದರೂ ಯಶೋದೆಯ ಕಂದನಾಗಿ ಶ್ರೀಕೃಷ್ಣ ಬೆಳೆದಂತೆ ಸಂಗಮ್ಮತಾಯಿ ಗಭ್ರಸಂಜಾತನಾಗಿ ಇದ್ದರೂ ಹರಕರುಣೆಯಿಂದ ಆದಯ್ಯ ಮಡಿಯಮ್ಮ ದಂಪತಿಗಳ ಮಡಿಲ ಮಗುವಾದ ಮುದ್ದು ಶರಣಬಸವ. ಶಾಲೆ ಸೇರಿದ ದಿನವೇ ಓಂ ಕಾರದ ಅನಂತ ಅಥ್ರಗಳ ಕುರಿತು ಪ್ರಶ್ನಿಸಿ ಮಹಾಜ್ಞಾನಿಯಾಗುವ ಲಕ್ಷಣ ಮೆರೆದವರು. ಗುರುಗಳ ಅಡಿದಾವರೆಯಲ್ಲಿ ನಮ್ರನಾಗಿ ಕುಳಿತು ಸಕಲಶಾಸ್ತ್ರಗಳನ್ನು ಕಲಿತವರು. ಗುರು ಲಿಂಗ ಜಂಗಮ ಮಹಿಮೆ ಗುರುಮುಖೇನ ಅರಿತು ಜೀವನವೀಡಿ ಆಚರಿಸಿದರು. ವಿಭೂತಿ ರುದ್ರಾಕ್ಷಿ ಮತ್ತು ಪಂಚಾಕ್ಷರಿ ಮಂತ್ರಗಳನ್ನು ಪಾದೋದಕ ಪ್ರಸಾದಗಳನ್ನು ಜೀವನದ ಅವಿಭಾಜ್ಯ ಅಂಗವಾಗಿಸಿ ಕೊಂಡವರು. ಗುರುವಿನ ನೆನದಾರ, ಪರಿಹಾರ ಪಾಪವು; ಗುರವೇ ದೊಡ್ಡವ ಹರನಿಗೆ, ಗುರುವು ತಾ ದೊಡ್ಡವ,ಆ ಹರನ ಹಾಡೂದು ಬಿಟ್ಟು, ನರರ ಹಾಡೂದು ಬಲು ಬರಿಯೆ ಎಂದು ಗುರುಲಿಂಗ ಕವಿ ಗುರುವಿನ ಕುರಿತು ಹಾಡಿದ್ದನ್ನು ಅಕ್ಷರಶ: ಆಚರಿಸಿದವರು.ಗುರುವಾಜೆÕಯಂತೆ ಸಂಸಾರಿಯಾದ ಶರಣಬಸವರು ಮೃದುಭಾಷಿಗಳು. ನಿತ್ಯಪೂಜೆ, ಅತಿಥಿ ಸತ್ಕಾರ, ಶಿವಾನುಭವ ಗೋಷ್ಠಿ, ದೀನ ಹೀನರ ಸೇವೆಗಳನ್ನು ಪತ್ನಿ ಮಹಾದೇವಿಯೊಡನೆ ಪಾಲಿಸುತ್ತ ಗೃಹಸ್ಥಾಶ್ರಮಕ್ಕೆ ಮಾದರಿ ತಾವಾದರು.ಶರಣಬಸ್ಸಪ್ಪನವರ ಗೃಹಸ್ಥಿಕೆಯಲ್ಲಿನ ದಾಸೋಹ ಜೀವನ ಸೋದರರಿಗೆ ಹಿಡಿಸದಿರಲು ಯಾರನ್ನೂ ದೂರದೇ ಪಾಲಿಗೆ ಬಂದದ್ದು ಪಂಚಾಮೃತ ಎಂದು ಸ್ವೀಕರಿಸಿ ಕಡೆಗಾದರು. ಸೋದರರಿಂದ ಅನಿವಾಯ್ರವಾಗಿ ಭಾಗವಾಗುವ ಸಂದಬ್ರದಲ್ಲೂ ಸಹನ ಶೀಲತೆ ಮೆರೆದು ಆದಶ್ರ ಸ್ಥಾಪಿಸಿದರು. ಲೌಕಿಕದಲ್ಲಿ ಅಲೌಕಿಕ ಸಾಧಿಸುವ ಕೆಲಸಕ್ಕೆ ನಾಂದಿ ಹಾಡಿದರು. ನಿತ್ಯ ದಾಸೋಹ ನಿರಂತರ ವಾಯ್ತು. ಮನುಜ ಮಾತ್ರರಿಗೆ ಅಲ್ಲದೆ ಸಕಲ ಜೀವರಾಶಿಗಳಿಗೂ ದಾಸೋಹ ನಡೆಸಿದರು.
ಕೃಷಿಯನ್ನು ಕಾಯಕವನ್ನಾಗಿಸಿಕೊಂಡ ಶರಣಬಸವರು ಕೃಷಿಯಲ್ಲಿ ಪಕ್ಷಿಗಳ ಸಹಭಾಗಿತ್ವ ತಿಳಿಸಿದರು. ಪಕ್ಷಿಗಳನ್ನು ಓಡಿಸುವುದರಿಂದ ಬೆಳೆಗಳು ರೋಗಗ್ರಸ್ತವಾಗಿ ಇಳುವರಿ ಕಡಿಮೆ ಆಗುತ್ತದೆ ಎಂದರಿತು ಹೊಲಕ್ಕೆ ಬರುವ ಪಶುಪಕ್ಷಿಗಳಿಗೆ ಮತ್ತು ಹೊಲದ ಬದಿಯಲ್ಲಿ ಹಾದು ಹೋಗುವ ಜನರಿಗಾಗಿ ಕುಡಿವ ನೀರಿನ ವ್ಯವಸ್ಥೆ ಮಾಡಿದರು. ಶರಣರ ಹೊಲದ ಬದುವಿನಲ್ಲಿ ನೀರು ನೆರಳು ಸಿಕ್ಕಿದ್ದರಿಂದ ಪಕ್ಷಿಗಳು ಅಲ್ಲಿ ನೆಲೆಯೂರಿದವು. ಮತ್ತು ತಮ್ಮ ಸಹಜವಾದ ಆಹಾರವಾದ ಕ್ರಿಮಿಕೀಟಗಳನ್ನು ತಿಂದದ್ದರಿಂದ ಜೊಳದ ಬೆಳೆ ಹೊಲ ತುಂಬಿ ಬೆಳೆಯಿತು. ಸುಗ್ಗಿಕಾಲದಲ್ಲಿ ರಾಶಿ ಮಾಡಿದಾಗ ಜನ ಬೆರಗಾಗುವಂತೆ ಮುತ್ತಿನಂತಹ ಜೋಳ ರಾಶಿಯಾಗಿ ಖಣದಲ್ಲಿತ್ತು. ಬೆಳೆ ನಾಶಗೊಳಿಸುವ ಕ್ರೀಮಿಕೀಟಗಳನ್ನು ರೈತ ವಿರೋಧಿ ಕೀಟನಾಶಕಗಳಿಲ್ಲದೇ ಜೀವ ವೈವಿದ್ಯಗಳ ಸಹಾಯದಿಂದ ಕೀಟಗಳ ನಾಶಮಾಡಿ ಪವಾಡಸದೃಶ ಕೃಷಿ ಮಾಡಿದ ಕೀತ್ರಿ ಅಪ್ಪ ಶರಣಬಸಪ್ಪನವರಿಗೆ ಸಲ್ಲುತ್ತದೆ. ಪರುಶ ತಾಗಿದರೆ ಕಬ್ಬಿಣವೂ ಚಿನ್ನವಾಗುವಂತೆ ಕಳ್ಳತನ, ಸುಳ್ಳು, ವೋಸ, ವಂಚನೆಗಳ ಮಾಡುತ್ತ ಬದುಕ ಸಾಗಿಸುತ್ತಿದ್ದವರೆಲ್ಲ ಶರಣರು ಸದಾಚಾರದಿಂದ ಪ್ರಭಾವಿತರಾಗಿ ದೀಕ್ಷೆ ಪಡೆದು ಶರಣರಾದರು. ಕಾಲಾಂತರದಲ್ಲಿ ಮಡದಿ ಮಗ ಶಿವನ ಪಾದ ಸೇರಿದಾಗ ಅರಳಗುಂಡಿಗೆ ಋಣ ತೀರಿತು ಎಂದರು.ಹಣೆ ಮೇಲೆ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ, ಹೆಗಲ ಮೇಲೆ ಕಂಬಳಿ, ಕೈಯಲ್ಲಿ ತಂಬಿಗೆ, ತಲೆ ಮೇಲೆ ಮುಂಡಾಸು ಅದರ ಮೇಲೊಂದು ಶಿವಾನುಭವದ ಪುಸ್ತಕಗಳು ಬಾಯಲ್ಲಿ ಶಿವ ಮಂತ್ರ ಹೇಳುತ್ತ ಅರಳಗುಂಡಿಗೆ ಜನರಿಂದ ಬೀಳ್ಕೊಂಡು ಕಲಬುರ್ಗಿಯತ್ತ ಪಯಣ ಬೆಳೆಸಿದರು. ಯುಮುನೆ ಕೃಷ್ಣನಿಗೆ ದಾರಿ ಕೊಟ್ಟಂತೆ ಭೀಮೆ ಶರಣಬಸ್ಸಪ್ಪನವರಿಗೆ ದಾರಿ ನೀಡಿದಳು. ಅವರಾದಿಯಲ್ಲಿ ಗೌಡ ದಂಡರಾಯ ಶರಣರ ದಾಸೋಹಕ್ಕೆ ಜೊತೆಯಾಗಿ ನಿಂತನು. ಮಳೆಗಾಲದಲ್ಲಿ ಅನ್ನ ದಾಸೋಹಕ್ಕೆ ತೊಂದರೆ ಆದಾಗ ತನ್ನ ಮನೆಯ ಜಂತಿಯನ್ನ ಉರಿಸಿ ದಾಸೋಹ ನಡೆಸಿ ಶರಣರ ಪ್ರೀತಿಗೆ ಪಾತ್ರನಾದ. ಕಂದಾಯ ಕೀಳಲುಬಂದ ಸೈನ್ಯದೊಂದಿಗೆ ಬಂದ ಹೈದ್ರಾಬಾದಿನ ಸರದಾರ ಶರಣಬಸ್ಸಪ್ಪನವರರ ದಾಸೋಹದಿಂದ ಸಂಪ್ರೀತನಾಗಿ ಶರಣರ ಪಾದಗಳಿಗೆ ನಮಿಸಿ ಮುಂದೆ ಸಾಗಿದನು. ಶರಣರ ದಯೆ ಮತ್ತು ಧೈಯ್ರದಿಂದ ಪರಿಸ್ಥಿತಿಯನ್ನು ಎದುರಿಸಿದ್ದೇ ಒಂದು ಪವಾಡವಾಯ್ತು. ಅನ್ನ ಮತ್ತು ಜ್ಞಾನ ದಾಸೊಹಗಳ ಹರಿಕಾರರಾದರು ಶರಣಬಸಪ್ಪನವರು.
ಹಸಿದು ಬಂದವರಿಗೆ ಅನ್ನ ಮತ್ತು ಶುದ್ಧ ಜೀವನ ಸಾಗಿಸಲು ಶಿವಾನುಭವದ ಸಾರ ತಿಳಿಸುತ್ತಿದ್ದರು. ಶರಣರ ಕೀತ್ರಿ ಅಲೆಅಲೆಯಾಗಿ ಹರಡಿತು. ದೊಡ್ಡಪ್ಪಗೌಡರ ಬಿನ್ನಹ ಸ್ವೀಕರಿಸಿ ಕಲಬುರ್ಗಿ ಬರುವ ಮಾಗ್ರ ಮಧ್ಯೆದಲ್ಲಿ ಎಷ್ಟು ತಿಂದರೂ ಸಾಕು ಎನ್ನದ ಒಬ್ಬನ ಕೂಳುಬಡುಕತನ ಬಿಡಿಸಿದರು. ಕಿವಿ ನೋವಿನಿಂದ ಆತ್ಮಹತ್ಯೆಗೆ ಸಿದ್ದನಾದ ಬೇಡನ ಜೀವ ಉಳಿಸಿದರು. ಮೂಕನಿಗೆ ಮಾತು ಕೊಟ್ಟರು. ಜಂಗಮರೊಬ್ಬರ ಚಳಿಜ್ವರ ಗುಣವಾಗಿಸಿದರು. ಪರತಾಬಾದಿನ ಜನರಿಗೆ ಬರದ ಬೇಗೆ ತಾಗದಂತೆ ಅಂಬಲಿ ಮಾಡಿ ಉಣಬಡಿಸಿದರು. ಕಲಬುರ್ಗಿಗೆ ಬಂದು ಹೆಸರಿನಷ್ಟೇ ದೊಡ್ಡತನ ಮೆರೆದ ದೊಡ್ಡಪ್ಪ ಗೌಡರಲ್ಲಿ ನೆಲೆಸಿದರು. ಹಸಿದ ಹೊಟ್ಟೆಗೆ ಅನ್ನದ ದಾಸೋಹ ಮುನಿವ ಮನಸ್ಸಿಗೆ ನಿತ್ಯ ಶಿವಾನುಭ ಗೋಷ್ಟಿಗಳು ಬದುಕಿಗೆ ಹೊಸ ಅಥ್ರ ನೀಡಿದವು. ಕಣ್ಣಿಲ್ಲದ ರಾಜಶೇಖರನಿಗೆ ಕಣ್ಣು ಬಂದವು. ದೇಸಾಯಿ ದೊರೆಸಾನಿ ರೋಗವಾಸಿ ಮಾಡಿದರಲ್ಲದೆ ಮಗನನು ಪಡೆವಂತೆ ಹರಸಿದರು. ದೇಸಾಯಿ ತಾಯಿ ಶರಣಬಸ್ಸಪ್ಪನವರ ಕಾಯ್ರಕ್ಷೇತ್ರ ವಿಸ್ತಾರಗೊಳಿಸಲು ಅಗತ್ಯವಾದ ಜಾಗ ನೀಡಿದರು. ಚಿತ್ರಕಾರನ ದೆವ್ವ ಬಿಡಿಸಿದರು. ಮಕ್ಕಳಿಲ್ಲದವರಿಗೆ ಮಕ್ಕಳು ನೀಡಿದರು, ಕುಷ್ಠ ರೋಗ ಗುಣಪಡಿಸಿದರು, ತಕ್ಷಣ ಮಗನ ಬೇಕೆಂದು ಬಂದವರಿಗೆ ದೊಡ್ಡಪ್ಪಗೌಡರ ಮಗನನ್ನೇ ದಾನ ಮಾಡಿದರು. ದೊಡ್ಡಪ್ಪ ಶರಣರು ಮತ್ತು ನೀಲಮ್ಮ ತಾಯಿಯವರು ಶರಣಬಸ್ಸಪ್ಪನವರ ನೆರಳಾಗಿ ಬದುಕಿದರು. ತನುಮನಧನವನ್ನು ಗುರುಲಿಂಗಜಂಗಮಕ್ಕೆ ಅಪ್ರಿಸಿ ದಾಸೋಹ ಮಾಡಿದ್ದರಿಂದ ಮನೆ ಮಹಾಮನೆಯಾಯ್ತು. ಅನ್ನದಾಸೋಹ, ಶಿವಾನುಭವದ ಜ್ಞಾನ ದಾಸೋಹ ತಪ್ಪದೆ ನಡೆದವು. ಕಾಯಕದಿಂದ ಗಳಿಸಿದ್ದನ್ನು ಅನ್ನ ಮತ್ತು ಜ್ಞಾನ ದಾಸೊಹಗಳಿಗಾಗಿ ವಿನಿಯೋಗಿಸುತ್ತ ಸಮಾಜಸೇವೆ ಮಾಡುತ್ತ ಬದುಕ ಬೇಕೆಂಬ ಶರಣ ಸಂದೇಶ ಅನುಸರಿಸಿ ಬದುಕುತ್ತಿದ್ದುದರಿಂದ ಕಲಬುರ್ಗಿ ಕಲ್ಯಾಣದ ಮಹಾದ್ವಾರವೆಂದು ಕರೆಸಿಕೊಂಡಿದೆ. ಸಂಸಾರದಲ್ಲಿದ್ದೂ ಶಿವನ ಕಾಣುವ ಪರಿ ಹೇಳುತ್ತಿದ್ದರು.
ಶರಣಬಸಪ್ಪನವರ ಜೀವನವೇ ಒಂದು ವಿಶ್ವವಿದ್ಯಾಲಯ. ಸಾಥ್ರಕ ಬದುಕಿಗೆ ಬೇಕಾದ ಎಲ್ಲವೂ ಅಲ್ಲಿದ್ದವು. ಹೊಸ ತತ್ವಗಳನ್ನು ಸಾರಲಿಲ್ಲ, ಮತ್ತೊಂದು ಮಗದೊಂದು ಧಮ್ರ ಗ್ರಂಥ ಬರೆಯಲಿಲ್ಲ, ಉಪದೇಶಗಳನ್ನು ಮಾಡಲಿಲ್ಲ. ಹೇಳ ಬೇಕಾದದ್ದನ್ನು ಮೌನವಾಗಿ ನಡೆದು ತೋರಿಸಿದರು. ನಡೆದಂತೆ ನುಡಿದು ಬದುಕಿ ಅಮರ ರಾದರು. ಕಲಬುರ್ಗಿ ಕಣ್ಮಣಿ ತಾವಾದರು. ಅಪ್ಪ ಶರಣಬಸಪ್ಪನವರ ನೇತೃತ್ವದಲ್ಲಿ ನಡೆದ ದಾಸೋಹದಿಂದ ಅತಿಥಿಗಳು, ಅನಾಥರು, ಅಸಾಹಯಕರು ರೋಗಿಗಳು, ಹಸಿವೆಯಿಂದ ಬಳಲುವುದು ಎಲ್ಲವೂ ಅಳಿದು ಹೋದವು. ಶರಣಬಸಪ್ಪನವರ ಅಂತ:ಕರಣ ಹರಿದು ಪವಾಡ ವಾಯ್ತು. ರೋಗಿಗಳ ರೋಗ ನಿವಾರಣೆ ಆಯ್ತು, ಬಂಜೆ ತಾಯಿಯಾದಳು, ಕುರುಡುತನ, ಹುಚ್ಚು, ಕುಷ್ಟ ರೋಗ ಎಲ್ಲ ನಿವಾರಣೆಯಾದವು. ಸದಾಚಾರದಿಂದ ನಡೆಯ ಬಯಸಿದವರಿಗೆ ದೀಕ್ಷೆ ನೀಡಿದರು. ಖ್ಯಾತ ತತ್ವಪದಕಾರ ಜ್ಞಾನಿ ಕಡಕೋಳ ಮಡಿವಾಳಪ್ಪನವರಿಗೂ ದೀಕ್ಷೆ ಕೊಡಿಸಿದರು. ಕಲ್ಯಾಣದ ಮಹಾದ್ವಾರ ಎಂದು ಹೆಸರಾದ ಕಲಬುರ್ಗಿಯೇ ಕಲ್ಯಾಣವಾಯ್ತು. ಶರಣರ ಪ್ರೇರಣೆಯಿಂದ ಕಲಬುರ್ಗಿ ನಾಡಿನ ಪ್ರತಿ ಮನೆ ದಾಸೋಹ ಮಹಾಮನೆಯಾಯಿತು. ಇಂದಿಗೂ ಕೆಲ ಮನೆ ಗಳಲ್ಲಿ ಇಂದಿಗೂ ಗೃಹಿಣಿಯರು ವೊದಲ ರೊಟ್ಟಿಯನ್ನು ಮಗನಿಗೆ ನೀಡದೆ ದಾಸೋಹಕ್ಕೆ, ಅತಿಥಿಗಳಿಗೆ ಇಲ್ಲವೆ ಆಕಳಿಗೆ ನೀಡುತ್ತಿದ್ದಾರೆ. ಕಲಬುರ್ಗಿಯಲ್ಲಿ ಅನ್ನ ನೀರಿನ ಕೊರತೆ ಕಾಣಿಸಲಿಲ್ಲ.ಶರಣರು ನಡೆಸಿದ ಶಿವಾನುಭವ ಗೋಷ್ಠಿಗಳು ಜ್ಞಾನ ದಾಸೋಹಕ್ಕೆ ನಾಂದಿ ಹಾಡಿದವು. ಶರಣರು ಮರಣವೇ ಮಹಾನವಮಿ ಭಾವಿಸಿದಂತೆ ಅಂತಿಮವಾಗಿ ತಮ್ಮ ಆರೋಗ್ಯವನ್ನೇ ದಾಸೋಹಮಾಡಿ ಅಮರರಾದರು. ಚಿರಂಜೀವಿ ಗಳಾದರು. ತಾವು ಸದಾ ಕಲಬುರ್ಗಿಯ ಭಕ್ತರ ಮನದಲ್ಲಿರುವೆ ಎಂಬ ಮಾತಿಗೆ ಉದಾಹರಣೆಯಾಗಿ ಮಹಾಸಮಾಧಿಯಲ್ಲಿ ಲೀನವಾದನಂತರವೂ ಭಕ್ತರಿಗೆ ದಶ್ರನ ನೀಡಿದರು. ಗುರು-ಶಿಷ್ಯರ ಅವಿನಾಭಾವ ಸಂಬಂಧ ದ್ಯೋತಕವಾಗಿ ಮಹಾಸಮಾಧಿಯ ಮೇಲೆ ಅಪ್ಪ ಶರಣಬಸಪ್ಪನವರ ಅವಳಿ ದಿವ್ಯಬಿಂಬಗಳಿವೆ. ಶರಣಬಸ್ಸಪ್ಪನವರ ದಾಸೋಹ ಪರಂಪರೆ ಹಸಿರಾಗಿಡಲು,ಜೀವನದ ಉಸಿರಾಗಿಸಲು ಆಚರಿಸುವ ಉತ್ಸವವೇ ಶ್ರೀಶರಣಬಸವೇಶ್ವರರ ರಥೋತ್ಸವ.
ಫಾಲ್ಗುಣ ಬಹುಳ ಪಂಚಮಿ ಸೋಮವಾರದಂದು ಶರಣಬಸಪ್ಪನವರು ಸಮಾದಿಸ್ಥರಾದ ದಿನದಂದು ಪ್ರತಿವಷ್ರ ರಥೋತ್ಸವ ನಡೆಯುತ್ತದೆ. ಶರಣಬಸಪ್ಪನವರು ಮಹಾಸಮಾಧಿ ಹೊಂದಿ (11-03-1822) 190 ವಷ್ರಗಳು ಕಳೆದಿವೆ. ಆದರೂ ಶರಣಬಸ್ಸಪ್ಪನವರು ನೆನೆದವರ ಮನದಲ್ಲಿದ್ದಾರೆ. ಅಮರರಾಗಿ ಆಸರೆಯಾಗಿದ್ದಾರೆ. ಮಹಾದಾಸೋಹದ ಪವ್ರ ದಿನದಂದು ಕಲಬುರ್ಗಿ ನಾಡಿನ ಜನ ಜಾತಿ ಮತ ಪಂಥ ಭಾಷೆಗಳ ಬೇಧ ಬದಿಗಿರಿಸಿ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿಪುಷ್ಪ ಸಮಪ್ರಿಸಿ ಧನ್ಯರಾಗುತ್ತಿದ್ದಾರೆ. ಕಲಬುರ್ಗಿ ಶ್ರೀ ಶರಣಬಸವೇಶ್ವರರ ಕಾಯ್ರಕ್ಷೇತ್ರದಲ್ಲಿ 191ನೇ ಮಹಾಸಮಾಧಿಯ ಕಲಬುರ್ಗಿ ಅಪ್ಪ ಶ್ರೀ ಶರಣಬಸಪ್ಪನ ನೆನೆಯೋಣ. ಅವರು ನಡೆದು ನುಡಿದು ತೋರಿಸಿದ ಭಕ್ತಿಮಾಗ್ರದಲ್ಲಿ ಸಾಗುತ್ತ ಮತ್ತು ದಾಸೋಹವನ್ನು ಜೀವನವನ್ನು ಅಳವಡಿಸಿಕೊಂಡು ಬದುಕು ಸಾಥ್ರಕ ಮಾಡಿಕೊಳ್ಳೋಣ ಹಾಗೂ ಭವ್ಯವಾಗಿಸಿಕೊಳ್ಳೋಣ.
-ಮಹಾದೇವಯ್ಯ ಕರದಳ್ಳಿ
Related Posts:
- Sharanabasaveshwar car festival today | It marks the 193rd death anniversary of the saint
- Appan Jathari/ Car Festival in Gulbarga city on March 21, 2014
- Thousands of devotees participated in the Sharanabasaveshwar temple car festival, Gulbarga
- Gulbarga graced up for car festival
- Thousands of devotees took part in 191st Jathara Mahosthava, Gulbarga
12 comments
Sharanabasaveshwar car festival today | It marks the 193rd death anniversary of the saint - Namma Gulbarga says:
Mar 10, 2015
[…] […]
shivakumar mala B'bay. says:
Mar 21, 2014
R/sir,
As on to day i.e.21st’march,2014 is the 192’nd day of shri.sharanaBasaveshara jatra ,so, wish you all happy & prosperous day of the day. Let us of all, request pry for blessing by the sharanBasava to our fantastic mother land in the same thought-way not only for human being but,even every creature on the earth.
with regards.
Nagaraj says:
Jul 31, 2013
its a fantastic matter about lord Sharnabasaveshwara,
Weldone keep it up.
Nagaraj Berji Patil Savalgi(B)
Manjunath s Jabashetty says:
Apr 25, 2013
²æ ±ÀgÀt§¸ÀªÉ¸ÀégÀgÀ fªÀ£À ZÀjvÉæ ªÀÄvÀÄÛ CªÀgÀ zÁ¸ÉƺÀ ZÀjvÉæ E£ÀÄß ºÉa£À jwAiÀÄ°è d£ÀjUÉ MzÀ®Ä ºÁPÀ¨ÉPÀÄ EzÀjAzÀ d£ÀgÀÄ M¼ÉîAiÀÄ ªÀiÁUÀðzÀ°è ºÉÆUÀÄvÁgÉ JA§ £À£Àß §AiÀÄPÉ. ²æ ±ÀgÀt§¸ÀªÉ¸ÀégÀgÀ ¥ÀÄgÁt,ºÁzÀÄUÀ¼ÀÄ E£ÀÄß ºÉa£À jwAiÀÄ°è. F MAzÀÄ ªÉ§ ¸ÉÊl £À°è C¼ÀªÀr¸À¨ÉPÀÄ
shivananda Hombal says:
Dec 21, 2012
ಲೇಖನ ಚೆನ್ನಾಗಿದೆ. ಧನ್ಯವಾದಗಳು. ಆದರೆ ಗರ್ಭಗುಡಿಯಲ್ಲಿನ ಮೂರ್ತಿಗಳ ಬಗ್ಗೆ ನೀಡಿರುವ ವಿವರಣೆ ಸ್ಪಷ್ಟವಾಗಿಲ್ಲ. ಸ್ಪಷ್ಟವಾಗಿ ಹೇಳುವುದು ಅಗತ್ಯ.
ಇನ್ನೊಂದು ಬಹುಮುಖ್ಯ ಸಂಗತಿ ಎಂದರೆ ಲೇಖನದ ಎಲ್ಲಕಡೆ ಬರುವ `ಅರ್ಕ – ಒತ್ತು’ – `ರ – ಒತ್ತು ಆಗಿ ಬಂದಿದೆ. ಉದಾ : ಧರ್ಮ – ಧಮ್ರ ಆಗಿರುವುದು. ದಯವಿಟ್ಟು ಇದೊಂದು ಸಂಗತಿಯನ್ನು ಆದಷ್ಟು ಬೇಗ ಸರಿಪಡಿಸಬೇಕಾಗಿ ಕೋರಿಕೆ.
– ಶಿವಾನಂದ ಹೊಂಬಳ
Nagaraj.g.patil says:
Oct 28, 2012
Sakal jivagalanu oleayanu bayasuw namma kalburagi janate namma sharanara dharm paripalane
vivek says:
Sep 25, 2012
proud to be lingayat
DEVINDRA B N says:
Sep 17, 2012
(PRATI DIN MAHADASHOHA) SRI SHARANABASAWESHAWR
VISHAVADA ELLA JEEVEGALANU KAPADU KALLABURGI SHARANABASHAWA
G K Raj says:
Mar 14, 2012
I am in Lagos but i felt as if i was in Gulbarga. Thanx for sharing photo and video of Jatre
S.B.GADWAL says:
Mar 12, 2012
SHREE SHARANABASWESHWAR MAHARAJ KI JAI!!!!!!!!!
MMB says:
Mar 11, 2012
Please translate it in english ,
Vinay Biradar says:
Mar 11, 2012
A very good attempt to introduce Lord Sharnabasaveshwara to all of us. Please correct the grammatical errors in the write-up.