ಶರಣಬಸವರ ಕಾಲ ಕ್ರಿ.ಶ.1746- 1822 ಎಂದು ಗುರುಲಿಂಗಕವಿಗಳ ಶ್ರೀಶರಣಬಸವೇಶ್ವರ ಪುರಾಣದ ಸಂಪಾದಕರಾದ ಡಾ ಎಲ್ ಬಸವರಾಜು ಸಂಶೋಧಕರು ಹೇಳಿದ್ದಾರೆ. 18–19ನೇ ಶತಮಾನದ ಕಾಲ ಖಂಡ ಭಾರತದ ಮಟ್ಟಿಗೆ ಸಂಕ್ರಮಣ ಕಾಲ. ಬ್ರಿಟಿಷರ ಕಪಿಮುಷ್ಠಿಯಲ್ಲಿ ಭಾರತ ನಲಗುತ್ತಿದ್ದ ಕಾಲವಾಗಿತ್ತು. ಒಂದೆಡೆ ಹೈದ್ರಾಬಾದಿನ ನಿಜಾಮ, ಮರಾಠರ ಪೇಶ್ವೆಯವರು, ವೊಗಲ ಪಳಿಯುಳಿಕೆಗಳಿಂತ ಸಂಸ್ಥಾನಗಳು ಬ್ರಿಟಿಷರ ಅರಸೊತ್ತಿಗೆ ಒಪ್ಪಿಕೊಂಡ ಕಾಲ. ಮತ್ತೊಂದೆಡೆ ಬ್ರಿಟಿಷರು ಒಂದೊಂದಾಗಿ ದೇಶಿ ಸಂಸ್ಥಾನಗಳನ್ನು ನುಂಗುವ ಹುನ್ನಾರವನ್ನು ಗಮನಿಸಿ ದೇಶಿ ಸಂಸ್ಥಾನಗಳು ಅಲ್ಲಲ್ಲಿ ಪ್ರತಿಭಟಿಸುವ ಕಾಲವಾಗಿತ್ತು. ಇಂತಹ ಸಂದಿಗ್ದ...